ಕೀರ್ತನೆ - 141     
 
ಬ೦ಟನಾಗಿ ಬಾಗಿಲ ಕಾಯ್ವೆ ಹರಿಯ ವೈಕುಂಠದ ಸೊಂಪಿನ ದಾಸರ ಮನೆಯ ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆ ಬರುವ ಹೋಗುವರ ವಿಚಾರಿಸುತಿರುವೆ ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀ ಹರಿಯ ಸಮ್ಮುಖದ ಓಲಗದೊಳಿರುವೆ ' ತೊತ್ತು ತೊಂಡನಾಗಿ ಬಾಗಿಲ ಕಾಯ್ವೆ ಚಿತ್ರದ ಚಾವಡಿ ರಜವನು ಬಳಿವೆ ಮುತ್ತಿನ ರಂಗವಲ್ಲಿಯನಿಟ್ಟು ಬರೆವೆ ರತ್ನಗ೦ಬಳಿ ಹೊತ್ತು ಹಾಸುವೆನು ವೇಳೆವೇಳೆಗೆ ನಾನೂಳಿಗವ ಮಾಡುವೆ ಆಲವಟ್ಟಿಗೆ ಚಾಮರವ ಬೀಸುವೆ ತಾಳದಂಡಿಗೆ ಭ್ರು೦ಗಿ ಮೇಳಗಳ ಕೂಡಿ ಶ್ರೀ ಲೋಲನ ಕೊಂಡಾಡಿ ಪಾಡುವೆನು ಎಂಜಲ ಹರಿವಾಣ೦ಗಳ ಬೆಳಗುವೆ ಕಂಜನಾಭನ ಪಾದಕಮಲವ ತೊಳೆವೆ ರಂಜಿಪ ಕುಸುಮದ ಮಾಲೆ ತಂದಿಡುವೆ ಸಂಜೆಗೆ ಪಂಜಿನ ದಾಸನಾಗಿರುವೆ ಮೀಸಲೂಳಿಗವ ನಾ ಮಾಡಿಕೊಂಡಿರುವೆ ಶೇಷ ಪ್ರಸಾದವ ಉಂಡುಕೊಂಡಿರುವೆ ಶೇಷಗಿರಿ ಕಾಗಿನೆಲೆಯಾದಿಕೇಶವನ ದಾಸರ ದಾಸರ ದಾಸರ ಮನೆಯ