ಕೀರ್ತನೆ - 138     
 
ಬಯಗುತನಕ ಆಟ ಕೂಟ ಊಟದ ಕೆಲಸ ಉಂಡ ಮೇಲೆ ಶಯನ ಬಯಲಾಯಿತು ಈ ಒಗತನವಲ್ಲ ರಕ್ಷಿಸಯ್ಯ ರಘುಕುಲ ತಿಲಕ ಪುರಾಣವಿಲ್ಲ ಪುಣ್ಯಕತೆಯಿಲ್ಲ ಪಾರಾಯಣದಿ ಮನಸಿಲ್ಲ ತರೋಣ ಬರೋಣ ತಿನ್ನೋಣ ಮಲಗೋಣ ಮತ್ತೇಳೋಣ ಕಣ್ಣಿಗೆ ಜೋಂಪು ಹತ್ತುವತನಕ ಅನ್ಯವಿಷಯ ಮಾತುಕತೆಯಾಟ ಹೆಣ್ಣು ಹೊನ್ನು ಮಣ್ಣು ಮಮಕಾರದಿ ಒಳಹೊರಗಿಣುಕಾಟ ಹೀಗಾಗಿ ನಿನ್ನಲ್ಲಿಗೆ ಬಂದೆ ಇನ್ನಾದರೂ ಸಲಹೊ ಸಿರಿ ಕಾಗಿನೆಲೆಯಾದಿಕೇಶವ ಶಿರಬಾಗಿ ಬೇಡಿಕೊಂಬೆ