ಪಥ ನಡೆಯದಯ್ಯ ಪರಲೋಕ ಸಾಧನಕೆ - ಮ-
ನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ
ತನುರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆವ
ಘನಸಿ೦ಹ ಗಜ ಮೃಗಗಳಿಂದೊಪ್ಪುವ
ವನಿತೆಯರ ಕಾಯ ಕಾಂತಾರವೆಂಬ ಮಾರ್ಗದಿ
ಸ್ತನದ್ದಯ ಕಣಿವೆಯ ಮಧ್ಯೆ ಸೇರಿಹನು
ಗಿಳಿ ನವಿಲು ಕೋಗಿಲೆ ವಸಂತ ಭ್ರಮರಂಗಳ
ಬಲದೊಡನೆ ಮದನ ಮಾರ್ಗವ ಕಟ್ಟಲು
ಬಲವುಳ್ಳ ಭಕ್ತ ಮುನಿ ಸಂನ್ಯಾಸಿ ಯೋಗಿಗಳು
ಸುಲಿಸಿಕೊ೦ಡರು, ಕೆಲರು ಸಿಕ್ಕಿದರು ಸೆರೆಯ
ಕಾಳಗದೊಳಿದಿರಿಲ್ಲ ಸುರರು ದಾನವರು - ಕ
ಟ್ಹಾಳು ಮನ್ಮಥನ ಛಲದಂಕ ಬಿರುದು
ಪೇಳಲೆನ್ನಳವೆ ಬಡದಾದಿಕೇಶವರಾಯ
ನಾಳ ಸಂಗಡ ಹೋದರಾವ ಭಯವಿಲ್ಲ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ