ಕೀರ್ತನೆ - 134     
 
ನಂಬಬೇಡಿ ಸಿರಿಯ ತನ್ನದೆ ? ನಂಬಬೇಡಿ ಸಿರಿಯು ತನ್ನ ದೆಂಬ ನಿಮಿಷದೊಳಗೇನಹುದೊ ಡಂಬತನವಿದೇಕೆ ಹರಿಯ ಪಾ- ದಾಂಬುಜವನು ಭಜಿಸಿ ನರರು ಜಲಧಿಯನ್ನು ಪೀರ್ದ ಮುನಿಯ ಜನನಿ ಪೆಸರ್ಗೆ ಕಿವಿಯನಾ೦ತ ಖಳನ ಬಲವ ನಂಬಲಾತು ತಲೆಯ ತವಿಸಿದವನ ಸಿರಿಯು ಗಳಿಗೆಯೊಳಗೆ ಕೀಲು ಸಡಿಲದೆ - ಎಣಿಕೆ ಇಲ್ಲದ ದಳವು ಯಮನನಗರಿಗೈದದೆ - ದೈವಕೃಪೆಯು ತೊಲಗಲೊಡನೆ ದಾಳಿವರಿಯದೆ - ಕೇಳಿ ಜನರೆ ಅ೦ಧರಾಯನಾತ್ಮಜರು ಮ- ದಾಂಧರಾಗಿ ಮಲೆತು ಗೋತ್ರ ಬ೦ಧುಗಳನು ಲೆಕ್ಕಿಸದೆ ಇಭ ಪುರಿಯನಾಳಿದ ನೃಪತಿ ಕೌರ ವೇಂದ್ರನರಸುತನವು ತೊಡೆಯದೆ - ಸಕಲ ಸೈನ್ಯ ಬಂಧು ಬಳಗ ರಣದಿ ಮಡಿಯದೆ - ಶೌರಿ ಮುನಿಯ ಅಂದು ಅವನ ಪದವು ಮುರಿಯದೆ - ಕೇಳಿ ಜನರೆ ಧರಣಿಯ ಮುನ್ನಾಳ್ದ ನಹುಷ ಸಗರರೆನಿಪ ಭೂಪತಿಗಳು ಸಿರಿಯ ಜಯಿಸಲಿಲ್ಲ - ಮಿಕ್ಕ ನರರ ಪಾಡಿದೇನು ನೀವು ಬರಿದೆ ಭ್ರಾಂತರಾಗಬೇಡಿರೊ - ಎಂದಿಗಾದರು ಸ್ಥಿರವಿದಲ್ಲವೆ೦ದು ತಿಳಿಯಿರೊ - ಶ್ರೀ ಕಾಗಿನೆಲೆಯ ವರದ ಕೇಶವನನು ಭಜಿಸಿರೊ - ಕೇಳಿ ಜನರೆ