ಕೀರ್ತನೆ - 124     
 
ನಾ ನಿಮ್ಮ ದಾಸರ ದಾಸ ಈ ನರರ ಪಾಡೇನೆರಡು ದಿನದ ಸಂಸಾರ ಪ ಕರೆಸು ಕಂಬದಿ ಎಂದು ವಾದಿಸಿದವ ಕೆಟ್ಟ ಪರಹೆಣ್ಣಿಗಾಸೆ ಪಟ್ಟು ಕೀಚಕ ಕೆಟ್ಟ ಬರಿದೆ ದ್ರೌಪದಿಗಾಗಿ ದುರ್ಯೋಧನ ಕೆಟ್ಟ ಉರಿ ಹಸ್ತವ ಬೇಡಿ ಭಸ್ಮಾಸುರ ಕೆಟ್ಟ ಆಡಿದ ಮಾತಿಗೆ ಬಲಿ ನೀಡಲಾಗಿ ಕೆಟ್ಟ ಮಾಡುವ ದಾನ ತಡೆದು ಶುಕ್ರನು ಕೆಟ್ಟ ಕೂಡಿದ ಶಿರವರಿದು ರೂಢಿಗೀಶ್ವರ ಕೆಟ್ಟ ಬೇಡಲು ಗುಂಡಿಗೆ ಸೀಳಿ ಕರ್ಣನು ಕೆಟ್ಟ ಎರಡೆಂಟಾಡೆನೆಂದು ಹರಿಶ್ಚಂದ್ರ ಕೆಟ್ಟ ನೆರೆ ಪಗಡೆಯನಾಡಿ ಧರ್ಮಜನು ಕೆಟ್ಟ ಹರಿದು ಬಾಣವ ತೊಟ್ಟು ದಶರಥನು ಕೆಟ್ಟ ಹರಿಯ ಮೊರೆ ಸೇರಿದರ್ಗೆ ಸ್ಥಿರ ಪಟ್ಟ ಹಮ್ಮನಾಡಿ ಮುನ್ನ ಬಹ್ಮ ತಾ ಕೆಟ್ಟ ಅಮ್ಮನ ನುಡಿ ಕೇಳದೆ ಹನುಮಂತ ಕೆಟ್ಟ ತಮ್ಮನ ನುಡಿ ಕೇಳದೆ ರಾವಣನು ಕಟ್ಟ ನಿಮ್ಮ ನೋಯಿಸಿದ ಮೈರಾವಣನು ಕೆಟ್ಟ ಭಾಗೀರಥಿಯ ತಂದೆ ಬಹುದೈತ್ಯ ಕೊಂದೆ ಭೋಗಿಶಯನ ಶ್ರೀ ಲಕ್ಷ್ಮೀಕಾಂತನೆ ಭಾಗವತ ಪ್ರಿಯ ಭವಭಯಹರ ಕಾಗಿನೆಲೆಯಾದಿಕೇಶವಗೆ ನಮೊ ನಮೋ