ಕೀರ್ತನೆ - 122     
 
ನನ್ನವ್ವ ಕಲ್ಲ ಬಿಡೆ ಈ ಧೋತ್ರವ ಚೆನ್ನಾಗಿ ಒಗೆಯಬೇಕು ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಗೆ ಚೆನ್ನಕೇಶವನ ಪ್ರಸಾದಕ್ಕೊದಗಬೇಕು ಉಟ್ಟ ಧೋತ್ರವು ಮಾಸಿತು - ಮನದೊಳಗಿರುವ ದುಷ್ಪರೈವರುಗಳಿಂದ ಕಷ್ಟ ದುರಿತಗಳು ಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳು ಗಟ್ಯಾಗಿ ಒಗೆಯಬೇಕು ವೇದವನೋದಬೇಕು ಮನದೊಳಗಿದ್ದ ಭೇದವ ಕಳೆಯಬೇಕು ಸಾದರಣೆಯಿಂದ ತಿಳಿದು ನಿಶ್ಚಯವಾಗಿ ಕ್ರೋಧಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ ವೇಲಾಪುರದ ಚೆನ್ನಕೇಶವನ ಸೇವೆಗೆ ಆಲಸ್ಯವನು ಮಾಡದೆ ಕೋಲ ಹಿಡಿದು ದ್ವಾರಪಾಲಕನಾಗುವೆ ನೀಲ ಕು೦ತಳೆ ಕಲ್ಲ ಬಿಟ್ಟು ಆ ಕಡೆ ಸಾರೆ