ಕೀರ್ತನೆ - 121     
 
ನಡತೆ ಹೀನನಾದರೇನಯ್ಯ - ಜಗ ದೊಡೆಯನ ಭಕುತಿ ಇದ್ದರೆ ಸಾಲದೆ ಪು೦ಡರಾ ಪಾಂಡುನಂದನರು ಮತ್ತದರೊಳು ಕಂಡೋರ್ವಳೈವರು ಭೋಗಿಪರು ಖಂಡಿಸಿದರು ರಣದೊಳು ಗುರುಹಿರಿಯರ ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ ಕ೦ದನ ನಿರ್ಬಂಧಿಸುತಿರಲು ಅಂದು ಸಾಧಿಸಲು ಕಂಬದ ಬಳಿಯೆ ತನ್ನ ತಂದೆಯ ಕೊಲಿಸಿದನೆಂಬರು ಜನರು ದಾಸಿಯ ಜಠರದೊಳುಜನಿಸಿದ ವಿದುರ - ಸ- ನ್ಯಾಸಿಯೆಂದೆನಿಸಿಕೊ೦ಡ ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ ಕೇಶವನ ಭಕುತಿಯೊಂದಿದ್ದರೆ ಸಾಲದೆ