ದಾಸಾರ್ಯರ ದಾಸರ ದಾಸ ನಾನು - ಬಾಡ
ದೀಶ ಕಾಯ್ದುಕೊಳ್ಳೊ
ಗುಟ್ಟುಮಾಡಿಕೊ೦ಡಿರದೆ ಕ೦ಡವರಿಗೆ ಕಾರ್ಪಣ್ಯ
ಪಟ್ಟು ಬಡವನಾದೆನಲ್ಲ - ಅಯ್ಯ ಕೈ
ಗೊಟ್ಟು ರಕ್ಷಿಸುವರಿಲ್ಲ ಜನ್ಮ ಜನಂಗಳಲಿ
ಪುಟ್ಟುವಂತೆ ಮಾಡಬೇಡ ಮಾಧವ ಮನ್ನಿಸೊ ಎನ್ನ
ಮಡದಿ ಮಕ್ಕಳೆಂಬ ಪಾಶ ಮಮತೆ ಎನ್ನ ಕೊರಳ
ಬಿಡದೆ ಸುತ್ತಿಕೊ೦ಡಿತಲ್ಲಯ್ಯ
ಪಡೆದ ದ್ರವ್ಯವೆಲ್ಲ ವಸ್ತು ಕ್ಷೇತ್ರಂಗಳ ಕಾಣದೆ ನಿತ್ಯ
ನಡೆದುದ ವಿಸ್ತರಿಸಲಾರೆ ನೀಲಮೇಫಶ್ಶಾಮ ನಿನ್ನ
ಘೋರ ಸಂಸಾರವೆಂಬ ವಾರಿಧಿಯೊಳಗೆ ಬಿದ್ದು
ಪಾರಗಾಣದವನಾದೆನಲ್ಲಯ್ಯ |
ಧೀರಕರ್ತನಾದ ಬಾಡದಾದಿಕೇಶವೇಶ ಸವ
ಸಾರಿದೆ ಸಲಹೊ ಎನ್ನುದ್ಧಾರಿ ಮುದ್ದುಕೃಷ್ಣ ನಿನ್ನ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ