ತಾನ್ಯಾರು ತನ್ನ ದೇಹವ್ಯಾರು - ದಿವ್ಯ
ಜ್ಞಾನದಲಿ ತಿಳಿದಾತ ಪರಮ ಯೋಗಿ
ಸೂತಿಕಾವಸ್ಥೆಯಲಿ ನವಮಾಸ ನೆರೆದಾಗ
ಮಾತೆಯುದರದಿ ಬಂದು ಬೆಳೆದು ನಿಂದು
ಪಾತಕವದೊಂದು ಮೂರುತಿಯಾದ ತನುವೆಂದು
ನೀತಿಯಲಿ ತಿಳಿದಾತ ಪರಮ ಯೋಗಿ
ಆಸ್ಥಿಪಂಜರದ ನರಗಳ ತೊಗಲಿನ ಹೊದಿಕೆಯ
ವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯು
ರಕ್ತ ಮಲಮೂತ್ರ ಕೀವಿನ ಪ್ರಳಯದೊಡಲೆಂದು
ಸ್ವಸ್ಥದಿಂ ತಿಳಿದಾತ ಪರಮ ಯೋಗಿ
ಘೋರ ನರಕದ ತನುವು ಎಂದು ಮನದಲಿ ತಿಳಿದು
ಗೇರು ಹಣ್ಣಿನ ಬೀಜದಂತೆ ಹೊರಗಿದ್ದು
ಮಾರಪಿತ ಕಾಗಿನೆಲೆಯಾದಿಕೇಶವನ ಪಾದ
ವಾರಿಜವ ನೆನೆದವನೆ ಪರಮ ಯೋಗಿ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ