ಕೀರ್ತನೆ - 110     
 
ಛೀ ನಿನ್ನ ಮೋರೆ ಮೇಲೆ - ಠೊಣ್ಯ ಛೀ ನಿನ್ನ ಮೋರೆ ಮೇಲೆ ಹೊತ್ತರೆದ್ದು ಮುಖ ತೊಳೆದು ಮನೆಮನೆ ಪೋಕರಿ ಅಲೆಯುತಿದ್ದೆ ವಿತ್ತ ಮದದಿ ಪರಸ್ತೀಯರ ಕಂಡು ಅರ್ತಿಬಡುತಲಿದ್ದೆ ಲೆತ್ತ ಪಗಡೆ ಚದುರಂಗ ಆಟದಲ್ಲೆ ಹೊತ್ತು ಕಳೆಯುತಿದ್ದೆ ನಿತ್ಯ ನಿತ್ಯ ಈ ಪರಿ ಆಯುಷ್ಯವ ವ್ಯರ್ಥ ಕಳೆಯುತಿದ್ದೆ ಠೊಣ್ಯ ಕಂಡ ಕಂಡಲ್ಲಿಗೆ ಪೋಗಿ ಧನಂಗಳ ಕೊಂಡು ಬರುತ್ತಲಿದ್ದೆ ಹೆಂಡಿರು ಮಕ್ಕಳು ಹಿತದವರೆಂದು ಕೊಂಡಾಡುತಲಿದ್ದೆ ಖೋಡಿ ಮಾತುಗಳನು ಹೇಳಿ ಮಂದಿಯ ಕುಂಡೆ ಚಿವುಟುತಿದ್ದೆ ಭಂಡ ಬಾಳು ಇದು ರಂಡೆ ಗಂಡ ಕಂಡ್ಯ ಯಮನ ಬಾಧೆ ಠೊಣ್ಯ ಮಾನವ ಜನಕೆ ಬಂದು ಪುಣ್ಯ ಮತ್ತೇನೂ ಮಾಡದೆ ಹೋದೆ ದಾನವಾಂತ ಸತ್ಪಾತ್ರರಿಗೆ ನೀ ದೀನತ್ವವ ಪಡೆದೆ ಜ್ಞಾನಶೂನ್ಯ ಮದವೇರಿದ ಸೊಕ್ಕಿದ ಕೋಣಕೆ ಹುಟ್ಟಿದ್ಧೆ ದೀನರಕ್ಷಕಾದಿಕೇಶವ ವಿಠಲಂಗೆ ನೀನತಿ ದೂರಾದೆ ಠೊಣ್ಯ