ಕೀರ್ತನೆ - 107     
 
ಕೊಡಲು ನೀನಾರು ಬಿಡಲು ನೀನಾರು ಪೊಡವಿಗೊಡೆಯ ಶ್ರೀಹರಿ ಲೀಲೆಯದು ಮಾಡಲು ನೀನಾರು ಮಾಡೆನಲು ನೀನಾರು ಮಾಡದವರಿಂದ ಮಾಡಿಪ ಮೋಡಿರೂಪ ಮಾಡಬೇಕೆಂಬರ ತಡೆದು ಕಾಡಿಪನವನು ಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ ಪಾಡುವ ಪದ್ಯಗಳಲಿ ಭಾವವಾಗಿರುವ ನೋಡುವ ನೋಟಗಳ ನೋವು ಗ್ರಹಿಸುವ ನುಡಿವ ನುಡಿಯ ತಾತ್ಪರ್ಯವನರಿವ ನಾಡಿ ನರಗಳಂತೊಲಿವ ಆದಿಕೇಶವರಾಯ