ಕೀರ್ತನೆಯ ಮಾಡಿ ಕೈವಲ್ಯ ಪಡೆವರು ಜನರು - ಹರಿ
ಮೂರ್ತಿ ಶ್ರೀ ಚೆನ್ನಕೇಶವನ ಮನದೊಳಗಿಟ್ಟು
ಹಲುವು ಮಾಯಗಳಿಂದ ಹಂಬಲಿಸಿ ಕೆಡಬೇಡ
ಬಲವಂತರೊಡನೆ ಹಗೆ ಮಾಡಬೇಡ
ಕುಲದಲ್ಲಿ ಜನಿಸಿ ಕುಚೋದ್ಯ ಮಾಡಲುಬೇಡ
ನಲಿದು ಹರಿಯ ಪೊಗಳದ ನಾಲಗೆಯು ಬೇಡ
ಮಂದಮತಿಗಳ ಕೂಡ ಮಹಕಥೆಯ ನುಡಿಬೇಡ
ಯತಿಯಾದ ಮೇಲೆ ಸತಿಸುತರಾಸೆ ಬೇಡ
..................
ಹಿತ ತಪ್ಪಿ ನಡೆವಂಥ ಹೆ೦ಡತಿಯು ಬೇಡ
ಕೆಟ್ಟು ಹೋದವರನ್ನು ತಿರುಗಿ ಕರೆತರಬೇಡ
ಮುಟ್ಟಾದ ಮೇಲೆ ಮೋಹಿಸಿ ಕೂಡಬೇಡ
ಭ್ರಷ್ಟನಾಡಿದನೆಂದು ಸಿಟ್ಟಿನಲಿ ನುಡಿಬೇಡ
ಕಷ್ಟದೆಸೆಯೊಳು ಧೈರ್ಯ ಬಿಟ್ಟು ಕಡಬೇಡ
ವಿಟಜನರ ಕೂಡಿ ವೇಶ್ಯಾವಾರ್ತೆಗಿಳಿಯಬೇಡ
ಸಟೆ ಹೇಳಿ ಸಂಸಾರ ಕೆಡಿಸಬೇಡ
ತುಟಿ ಮೀರ್ದ ಹಲ್ಲಂತೆ ದೂತ ಎಂದಿಗು ಬೇಡ
ನಿಟಿಲನೇತ್ರನು ನಾನೆನುವ ಜಂಭ ಬೇಡ
ತೀರ್ಥ ಯಾತ್ರೆಗೆ ಪೋಗಿ ತಿರುತಿರುಗಿ ಬಳಲಿ ಕೃ
ತಾರ್ಥನಾದೆನು ಎಂಬ ಘನತೆ ಬೇಡ
ಪಾರ್ಥಸಾರಧಿ ಕಾಗಿನೆಲೆಯಾದಿಕೇಶವನ
ಸಾರ್ಥಕದಿ ಭಜಿಸಿ ಸುಖಿಯಾಗು ಮನುಜ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ