ಕಾಯೊ ಕರುಣಾಕರನೆ ಕಡು ಪಾಪಿ ನಾನು
ನ್ಯಾಯವೆಂಬುದು ಎನ್ನೊಳೆಳ್ಳನಿತಿಲ್ಲ
ಎಣ್ಣೆ ಕೊಪ್ಪರಿಗೆಯೊಳ್ಬಿದ್ದು ಸ್ತುತಿಸಿದವನಲ್ಲ
ಚಿನ್ನಕಶಿಪು ಬಾಧೆಗೊಳಗಾದವನಲ್ಲ
ಬಣ್ಣಗೆಟ್ಟಡವಿಯಲಿ ತಪಸು ಮಾಡಿದವನಲ್ಲ
ಹೆಣ್ಣನೊಲ್ಲದೆ ನಿನ್ನ ಬಂಟನಾದವನಲ್ಲ
ಒಲಿದು ದಾನವನಿತ್ತ ವೈರಿಕುಲದವನಲ್ಲ
ಬಲು ಭಕುತಿಯ ದಾಸಿ ಪುತ್ರ ನಾನಲ್ಲ
ಕಲಹದಲಿ ಪಣೆಗೆ ಬಾಣವ ನೆಡಿಸಿದವನಲ್ಲ
ಕಳವಳದಿ ಕರೆದ ಪಾಂಚಾಲಿ ನಾನಲ್ಲ
ಉರಗರಾಜನ ತೆರದಿ ಹಾಸಿಗಾದವನಲ್ಲ
ಗರುಡನಂದದಿ ಪೊತ್ತು ತಿರುಗಿದವನಲ್ಲ
ಸಿರಿಧರನೆ ಕಾಗಿನೆಲೆಯಾದಿಕೇಶವ ನಿನ್ನ
ಚರಣ ಡಿ೦ಗರಿಗ ಮಾತ್ರ ನಾನಾಗಿಹೆನೆಂದು
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ