ಕೀರ್ತನೆ - 103     
 
ಕಾಡುವ ದುರಿತಗಳನು ಬಿಡಿಸೆಂದು ಬೇಡಿಕೊಂಬೆನೊ ದೇವ ನಾ ನಿನ್ನ ಅಡಿದಾಸನೆಂಬೋ ಎನಗೊಂದು ದೃಢ ಬುದ್ಧಿಯು ಇಲ್ಲದೆ ಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆ ಕಡೆ ಹಾಯಿಸೊ ಎನ್ನೊಡೆಯ ನೀನಾದಡೆ ಆಸೆಗಳ ಆಧಿಕ್ಯದಿಂದೀ ಪರಿಯ ಯಮ ಪಾಶಕ್ಕೆ ಒಳಗಾದೆನೋ ಮೀಸಲೂಳಿಗವ ಮಾಡದೆಯೆ ಪರಿಪರಿಯ ಕ್ಲೇಶದಿಂದಲಿ ಗಾಸಿಗೊ೦ಡೆನಯ್ಯ ಪಾಡುವೆನು ನಿನ್ನ ನಾಮ ಸೀತಾರಾಮ ಆಡುವೆನು ಮನದಣಿವ ತನಕ ಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನು ಬಾಡದಾದಿಕೇಶವ ಭಕ್ತವತ್ಸಲನೆ