ಕೀರ್ತನೆ - 102     
 
ಕಷ್ಟ ತನುವಿನಲಿ ಹುಟ್ಟಿ ತೊಳಲುವಂಥ ಎಷ್ಟೆಂದು ತಾಳುವೆನೊ ಶ್ರೀರಂಗ ಅಷ್ಟರೊಳೆಂದೆನ್ನ ಅವಗುಣವೆಣಿಸದೆ ಕಷ್ಟ ಪಡಿಸುವುದೇನು ಶ್ರೀರಂಗ ನರಜನ್ನವನು ಎತ್ತಿ ನರಕದೊಳಗೆ ಸುತ್ತಿ ಗುರಿ ಗೊತ್ತು ಕಾಣೆನಯ್ಕ ಶ್ರೀರಂಗ ಪರಮಪಾತಕನಾಗಿ ಹರಿ ನಿಮ್ಮ ಸ್ಮರಣೆಯನು ಮರೆದು ಪಾಮರನಾದೆ ಶ್ರೀರಂಗ ಅತಿವೇಧೆಯಲಿ ಸತಿಸುತರೆಂಬ ಮಂದ ದು- ರ್ಮತಿಗೆ ಮರುಳಾದೆನೊ ಶ್ರೀರಂಗ ಅತುಳ ಪ್ರಪಂಚಕ್ಕೆ ಹಿತನಾಗಿ ದುಷ್ಟ ಸ೦ ಗತಿಯ ನಾನರಿದಿದ್ದೆನೊ ಶ್ರೀರಂಗ ಮಿತಿಮೀರಿ ಮನ ಹರಿ ಪದವ ನೆನೆಯದೆ ಪರ ಸತಿಯರಿಗಳುಪಿದೆನೊ ಶ್ರೀರಂಗ ಕೃತಬುದ್ಧಿಯೊಳು ಉನ್ನತನಾಗಿ ತಾನೆರೆದು ಸ್ತುತಿ ಮಾಡಿಕೊಂಡಿದ್ದೆನೈ ಶ್ರೀರಂಗ ಆಶಾಪಾಶಗಳೆಂಬ ದೇಹಕ್ಕೆ ಸಿಲ್ಕಿ ಸ ದ್ವಾಸನೆಯನು ಬಿಟ್ಟೆನು ಶ್ರೀರಂಗ ಮೋಸದಿಂದಾತ್ಮಘಾತುಕನಾಗಿ ಅಪರಾಧ ವೇಸೊಂದು ಮಾಡಿದೆನಯ್ಯ ಶ್ರೀರಂಗ ಈಸಲಾರದೆ ಹೊಳೆಯಲಿ ಕಾಸಲಾರದೆ ಒಲೆಯಲಿ ಸೋಸುತ್ತ ಕುಳಿತಿಹೆನು ಶ್ರೀರಂಗ ವಾಸುಕಿ ಶಯನ ನೆಲೆಯಾದಿಕೇಶವ ನಿಮ್ಮಾಶ್ರಿತ ದಾಸರ ದಾಸನಯ್ಯ ಶ್ರೀರಂಗ