ಕೀರ್ತನೆ - 95     
 
ಎ೦ದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಮುಂದರಿತು ಶ್ರೀಹರಿಯ ಭಜಿಸುವುದು ಲೇಸು ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆ ಬಲಿದ ಚರ್ಮವು ಮೇಲು ಹೊದಿಕೆಯಂತೆ ಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆ ಕೆಲಕಾಲಕೀ ಕೊಂಪೆ ಕಡೆಗಾಹುದಂತೆ ಕ೦ಡಿಗಳು ಒಂಬತ್ತು ಕಳಬಂಟರೈವರು ಅಂಡಲೆವುದೊತ್ತಿನಲಿ ಷಡುವರ್ಗವು ಮಂಡಲಕೆ ಹೊಸಪರಿಯ ಮನ್ನಥನ ಠಾಣ್ಯವಿದು ಮಂಡೆ ಹೋಗುವುದನ್ನು ಅರಿಯದೀ ಕೊಂಪೆ ಕೊಂಪೆಯಲಿ ಶೃಂಗಾರ ಕೊ೦ಡಾಡಲಳವಲ್ಲ ಕೆಂಪು ಬಣ್ಣಗಳಿಂದ ಚೆನ್ನಾಯಿತು ಇಂಪಿನಲಿ ಕಾಗಿನೆಲೆಯಾದಿಕೇಶವನನ್ನು ಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ