ಕೀರ್ತನೆ - 86     
 
ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ಇದ್ದೀಯಾ ಶ್ರೀಹರಿ ನೀನು - ವೃದ್ಧಿ ಸಿದ್ದಿಯ ನಡುವೆ ಪದುಮನಾಭನು - ಅಭಿ- ವೃದ್ಧಿಯಾಗಲು ತಡವೇನು - ಅಹ ಬುದ್ಧಿಈಯಾಗಿ ಭಜಿಸುವ ಬಾಳುವೆಗೆ - ಸ ಮೃದ್ಧಿಯಾಗಿ ಸರ್ವ ಸಿದ್ದಿಯ ಕೊಡಲಾಗಿ ನಂಬಿದ್ದ ಸುಜನರು ಹರಿಯೆ - ಕೆಟ್ಟ ದೆಂಬ ಸುದ್ದಿಯ ನಾನರಿಯೆ - ಸತ್ಕು- ಟುಂಬ ಎಂಬುದು ಹೊಸಪರಿಯೆ - ಅಹ ಬೆ೦ಬಲವಾಗಿ ಸಜ್ಜನರ ಸಲಹುವ ಕೃ- ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ ಶೇಷಗಿರೀಶ ಮದ್ಬಂಧು - ಆದಿ ಕೇಶವ ಗುರುವೆ ನೀನೆಂದು - ಕೃಷ್ಣ ಕ್ಷೇಶ ಬಿನ್ನೈಸುವ ಇಂದು - ಅಹ ಆಸೆ ಬಿಟ್ಟು ಪೂಜಿಸುವ ಭಕ್ತರ ದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ