ಆ ವೇಳೆಯಲಿ ಆರಾರ ಕಾಯ್ದೆಯೊ ದೇವ
ಈ ವೇಳೆಯಲಿ ಎನ್ನ ಕಾಯ್ದರದು ನಿಜವಹುದು
ಕರೆಯೆ ಕಂಬದಿ ಬಂದು ಹಿರಣ್ಮಕಶಿಪುವ ಕೊಂದೆ
ಶರಣನನು ಪಾಲಿಸುತೆ ಕಾಯ್ದೆಯಂತೆ
ಕರಿರಾಜ ಹರಿಯೆಂದು ಕರೆಯಲಾಕ್ಷಣ ಬಂದು
ಕರುಣದಿಂದಲಿ ಕಾಯ್ದೆಯಂತೆ ಹರಿಯೆ
ಧರೆಗಧಿಕನಾಥನಾ ತೊಡೆಯನೇರಲು ಕಂಡು
ಜರೆಯಲಾ ಧ್ರುವನ ನೀ ಕಾಯ್ದೆಯಂತೆ
ದುರುಳ ದುಃಶಾಸನ ದ್ರೌಪದಿಯ ಸೀರೆಯ ಸೆಳೆಯೆ
ತರುಣಿಗಕ್ಷಯವಿತ್ತು ಕಾಯ್ದೆಯಂತೆ ಹರಿಯೆ
ಅಂದು ರಾವಣ ವಿಭೀಷಣನ ನೂಕಲು ಕಂಡು
ಇಂದಿರಾರಮಣ ನೀ ಕಾಯ್ದೆಯಂತೆ
ಮಂದರೋದ್ಧರ ಮಧುಸೂದನ ಮಾಧವ ಗೋ
ಎಂದ ರಕ್ಷಿಸು ಬಾಡದಾದಿಕೇಶವರಾಯ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ