ಕೀರ್ತನೆ - 80     
 
ಆರೂ ಸ೦ಗಡ ಬಾಹೋರಿಲ್ಲ ನಾರಾಯಣ ನಾಮ ನೆರೆ ಬಾಹೋದಲ್ಲದೆ ಹೊತ್ತು ನವಮಾಸ ಪರಿಯಂತ ಗರ್ಭದಲಿ ಹೆತ್ತು ಅತ್ಕಂತ ನೋವು ಬೇನೆಗಳಿಂದಲಿ ತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆ ಹೊತ್ತುಗಳೆವರಲ್ಲದೆ ಬೆನ್‌ಹತ್ತಿ ಬಹರೆ ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿ ಕರವಿಡಿದು ಧಾರೆಯನೆರೆಸಿಕೊಂಡ ತರುಣಿ ಇನಿಯನ ಹರಣ ಹೋಗಲು ತಾ ಕಂಡು ಬರುವುದಕಂಜಿ ದಾರು ಗತಿಯೆ೦ದಳುವಳು ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರು ಧನಕಾಗಿ ನಿನ್ನನೆ ನಂಬಿದವರು ಅನುಮಾನವೇಕೆ ಜೀವನು ತೊಲಗಿದಾಕ್ಷಣದಿ ಇನ್ನೊಂದು ಅರಗಳಿಗೆ ನಿಲ್ಲಗೊಡರು ಸುತ್ತಲು ಕುಳ್ಳಿರ್ದ ಮಿತ್ರ ಬಾ೦ಧವರೆಲ್ಲ ಹೊತ್ತು ಹೋದೀತು ಹೊರಗೆ ಹಾಕೆನುವರು ಹಿತ್ತಲಾ ಕಸಕಿ೦ತ ಅತ್ತತ್ತ ಈ ದೇಹ ಹೊತ್ತುಕೊ೦ಡೊಯ್ದು ಅಗ್ನಿಯಲಿ ಬಿಸುಡುವರು ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡಿ ಪರಗತಿಗೆ ಸಾಧನವ ಮಾಡಿಕೊಳ್ಳೊ ಕರುಣನಿಧಿ ಕಾಗಿನೆಲೆಯಾದಿಕೇಶವರಾಯನ ನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ