ಕೀರ್ತನೆ - 78     
 
ಆರಿಗಳವಲ್ಲಾತ್ಮ ಯೋಗ ಸಿದ್ದಿ ಸೇರಿ ಸುಜ್ಞಾನದಲಿ ಸವಿದುಂಬಗಲ್ಲದೆ ರಜಸು - ತಾಮಸವೆಂಬ ರಯವನೆಲ್ಲವ ಕಳೆದು ಗಜ ಬಜಿಸುವ ಪಂಚಭೂತಗಳ ರಜನಿಗೆ ಸಿಲ್ಕದೆ ಪರಬ್ರಹ್ಮನ ಬಲು ನಿಜವ ತಿಳಿಯಬಲ್ಲ ನಿರ್ವಾಣಗಲ್ಲದೆ ಭಿನ್ನ ಭೇದಗಳೆಂಬ ಬಲು ಸಂಶಯ ಕಳೆದು ತನ್ನೊಳಗೆ ತಾ ತಿಳಿದು ತಾರಕಬ್ರಹ್ಮವ ಚೆನ್ನಾಗಿ ನೀ ನೋಡು ಚೆಲುವ ಕಂಗಳಿಂದ ತನ್ನಗ್ನಿಯೊಳಗಿರುವ ಪ್ರೌಢರಿಗಲ್ಲದೆ ಅಕಾರ ಉಕಾರ ಮಕಾರ ಎಂತೆಂಬ ಓ೦ಕಾರಕೆ ಕೂಡಿ ಎರಡಿಲ್ಲದ ಸಾಕಾರ ಕಾಗಿನೆಲೆಯಾದಿಕೇಶವನ ಆಕಾರದೊಡನಾಡುವರಿಗಲ್ಲದೆ