ಕೀರ್ತನೆ - 62     
 
ನಮಗೆಲ್ಲಿ ಮನೆಗಳಯ್ಯ ನಾರಾಯಣ ಕಮಲ ಬ್ರಹ್ಮಾಂಡ ಕೋಟಿ ಒಡಲೊಳು ತಾಳ್ದಂಥ ರಮಾಧವ ನಿಮಗೆ ನೀರೊಳಗೆ ವಾಸವಾಯಿತು ಜಲನಿಧಿಯನುತ್ತರಿಸಿ ಲಂಕೆಯನೈವುದಕೆ ಕುಲಗಿರಿಯ ಕಿತ್ತು ತಂದು ಸೇತುವೆ ಕಟ್ಟಿ ಸಲೆ ದೈತ್ಯನ ಕೊಂದು ಸೀತೆಯ ತಂದನಿಗೆ ಗಿರಿ ತಲೆಯ ಮೇಲೆ ಇಹ ಪ್ರಾಪ್ತಿಯಾಯಿತು ಪೃಥ್ವಿಯ ತಲೆಯನು ಪರೆಮಾಡಿ ತಾಳಿದ ಳುತ್ಯಾನಮಮ್ಮನ ತಂದೆಯ ಮೆಲುವನ ಮೃತ್ಯುನಾಶಕನೆಂದು ಸುತ್ತಿದ್ದಾನೆ ಹುತ್ತಿನೊಳಗೆ ಇಹ ಪ್ರಾಪ್ತಿಯಾಯಿತು ನಾಡದೇವತೆಗಳ ಸೆರೆಗಳ ಬಿಡಿಸಿ ಕ್ರೀಡೆಯಾಯಿತು ನಿಮ್ಮ ದಯದಿಂದಲಿ ರೂಢಿಯೊಳತಿ ಸೇವಕನಾದ ಗರುಡನಿಗೆ ಬೋಡು ಮರದ ಮೇಲೆ ಇಹ ಪ್ರಾಪ್ತಿಯಾಯಿತು ಜಲನಿಧಿ ಸುತನ ಮೊಮ್ಮಗನ ಕೊಂದ ಶೂರ ನ ಕುಲ ಸಹದೇವ ಪಾಂಡವರೈವರು ಲಲನೆ ದ್ರೌಪದಿಯೊಂದಿಗೆ ವನವಾಸ ಹೋಗಿ ಹೊಲದೊಳಗೆ ಇಹ ಪ್ರಾಪ್ತಿಯಾಯಿತು ಇಂಥಿಂಥವರಿಗೆಲ್ಲ ಮನೆಯಿಲ್ಲದಿರಲು ನ- ನ್ನಂಥವನಿಗಿನ್ನೆಲ್ಲ ಇರಲು ಸಾಧ್ಯ ಕಂತುಪಿತ ಕಾಗಿನೆಲೆಯಾದಿಕೇಶವನೆ ನಿ- ಶ್ಚಿಂತನಾಗಿ ನಿಮ್ಮ ಗುಡಿಯಲಿಪ್ಪೆನು