ಕೀರ್ತನೆ - 60     
 
ತಡೆಯುತಲಿದೆ ಪುಷ್ಪಮಾಲೆ ಒಡಲೊಳಗಾತ್ಮನ ವರ ಮಕುಟಾಗ್ರದಿ ನವರತ್ನಖಚಿತ ಕಿರೀಟ ದೊಡ್ಡಿತು ದಿವ್ಯ ನವತರ ಕುಸುಮ ದಾಮವು ಕಿರಿದು ವಿವರ ಬಲ್ಲ ಸದ್ಗುರು ತಮ್ಮ ಉದ್ದೇಶದ ನವ ವೈಜಯಂತಿಯ ಹಿರಿದಾಗಿ ಭಾವಿಸಿ ಸ್ಥಿರ ಮತಿಯೆಂಬ ಆಸನವನು ಅಳವಡಿಸಿ - ತ್ರಿ ಕರಣವೆಂಬ ತಾಂಬೂಲವನೊಪ್ಪಿಸುತ – ಮಾಯ ಮರವೆಯೆಂಬ ದಕ್ಷಿಣೆ ಕೊಟ್ಟು - ಮಮ ಭಾವ ದಿರುವಿನ ತಮವನೋಡಿಸಿ ನಿಂದ ಗುರುದೇವ ಅಜ್ಞಾನವೆಂಬ ನಿರ್ಮಾಲ್ಯವನು ಮಾಡಿ ಸುಜ್ಞಾನವೆಂಬಕ್ಷತೆಯ ಪಣೆಗೆ ಸೂಡಿ ಪ್ರಜ್ಞಾನವೆಂಬ ದೀವಿಗೆ ಸ್ತಂಭ ಹೂಡಿ ಪೂಜಿಸಿ ಪ್ರವಿಮಲ ಜ್ಯೋತಿಯ ದೇಶಿಕೋತ್ತಮ