ರಾಮಾನುಜರೇ ನಮೋ ನಮೋ
ಸ್ವಾಮಿ ಲಕ್ಷ್ಮಣ ರೂಪ ನಮೋ ನಮೋ
ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾ
ನಿಡುಶಿಖಿ ಯಜ್ಞೋಪವೀತದಿಂದ
ತೊಡೆದ ದ್ವಾದಶನಾಮ ಶ್ರೀ ಚೂರ್ಣದಿ ಒಪ್ಪುವ
ಒಡೆಯ ರಾಮಾನುಜರೆ ನಮೋ ನಮೋ
ಪಂಕಜನಾಭನ ಪಾವನ ಮೂರುತಿ
ಶಂಕೆಯಿಲ್ಲದೆ ನೆನೆವರ ಪಾಲಿಪನೆ
ಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದ
ಓಂಕಾರ ಮೂರುತಿ ನಮೋ ನಮೋ
ಕೇಶವ ಪಾದಾಂಬುಜ ಮಧುಕರಾ
ಪಾಷಂಡ ಗರ್ವಹರ ಗುರುತಿಲಕ
ಶೇಷಾವತಾರಿ ಮುನೀಶವಂದಿತ ಆದಿ
ಕೇಶವ ಮೂರುತಿ ನಮೋ ನಮೋ
Music
Courtesy:
ಸ್ಥಲ -
ವಿಷಯ -
ದೇವತಾಸ್ತುತಿ ಮತ್ತು ಗುರುಸ್ತುತಿ