ಕೀರ್ತನೆ - 50     
 
ಸೇವಕತನದ ರುಚಿಯನೇನರಿದೆಯೊ ದೇವ ಹನುಮರಾಯ ವೈರಾಗ್ಯ ಬೇಡಿ ಉದಧಿಯನು ದಾಟಿ ಸೀತೆಯ ಕಂಡು ಬಂದಾಗ ಮದುವೆಯನು ಮಾಡೆನ್ನಬಾರದಿತ್ತೆ ಪದದಿಂದ ಪಾಷಾಣ ಪೆಣ್ಣ ಮಾಡಿದಾತಗೆ ಇದೇನಸಾಧ್ಯವೊ ನೀ ಬಯಸಲೊಲ್ಲದೆ ಕ್ಷಣದಲ್ಲಿ ಸಂಜೀವನ ಪರ್ವತ ತಂದಾಗ ಹಣ ಹೊನ್ನುಗಳ ಬೇಡ ಬಾರದಿತ್ತೆ ವಿನಯದ ವಿಭೀಷಣಗೆ ರಾಜ್ಯವನಿತ್ತಂಥ ಧಣಿಗೆ ಏನಸಾಧ್ಯವೊ ಹನುಮ ನೀನೊಲ್ಲದೆ ಸಾರ್ವಭೌಮನು ತಾನೆ ಮೆಚ್ಚಿ ಬಳಿಗೈದಾಗ ಉರ್ವಿಯನು ಬೇಡಿದಡೆ ಕೊಡದಿಹನೆ ಸರ್ವವನು ತೊರೆದು ಶ್ರೀ ನೆಲೆಯಾದಿ ಕೇಶವನ ನಿರ್ವ್ಯಾಜ ಭಕುತಿಯನು ಬೇಡಿಕೊಂಡೆಯೊ