ಕೀರ್ತನೆ - 48     
 
ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯ ಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ – ಪೊಂ ಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯ ಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯ ಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯ ತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ