ಕೀರ್ತನೆ - 45     
 
ಜಯಮಂಗಲಂ ನಿತ್ಯ ಶುಭಮಂಗಲಂ ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆ ಸೇತುವೆಯ ಭರದಿಂದ ಲಂಘಿಸಿದರೆ ಸೀತೆಯನು ವಂದಿಸುತೆ ಉಂಗುರವನಿತ್ತವಗೆ ದೈತ್ಯಪುರವನು ಭರದಲುರಿಸಿದವಗೆ ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆ ಕುಸುಮವನು ತಂದು ದ್ರೌಪದಿಗಿತ್ತಗೆ ಕುಶಲತನದಲಿ ಕೌರವಾದಿಗಳ ಸಂಹರಿಸಿ- ದಸಹಾಯ ವೀರ ಶ್ರೀ ಭೀಮಸೇನಗೆ ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದರೆ ಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆ ಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆ ಮುದ್ದು ಶ್ರೀಆದಿಕೇಶವನ ಭಜಕಗೆ