ಕದರ ಮಂಡಲಗಿಯ ಕರುಣಿ ಹನುಮರಾಯ
ಸದುಗುಣವಂತನೆ ಹಣುವಂತನೆ
ಅಂಜನೆಯ ವರಸೂನು ಆಶ್ರಿತ ಕಾಮಧೇನು
ಮಂಜುಳ ಗಾನ ಗೀತ ಪರಮ ವಿಖ್ಯಾತ
ಸಂಜೀವನವ ತಂದ ವ್ಯೋಮ ಮಾರ್ಗದಿ ಬಂದ
ಅಂಜದ ಗುಣವಂತನೆ ಹಣುವಂತನೆ
ಶಶಿಧರಾನ್ವಯ ದೂತ ಸೌಮಿತ್ರಿಯ ವರೂಥ
ಅಸಮಾಸ್ತ್ರಧೃತವೇದ ಅಮಿತ ಪ್ರಖ್ಯಾತ
ಆ ಸುಗ್ರೀವ ಜಾಮಾತ ಮುಖ್ಯ ಪ್ರಾಣನಾಥ
ವಿಶಾಲ ಗುಣವಂತನೆ ಹಣುವಂತನೆ
ಕೋಣಿಯೊಳು ಕನಕದಾಸನ ನೆರಳು ಅನಕ
ಏನು ಬಲಿಸಿದೆಯೊ ಔಷಧಿಯ ಕುಣುಕ
ನೀನಿದ್ದರೆ ಕನಕ ಪ್ರಾಣ ತೆರಳುವ ತನಕ
ಶ್ರೀನಿಧೇ ಆದಿಕೇಶವ ಎನ್ನ ಜನಕ
Music
Courtesy:
ಸ್ಥಲ -
ವಿಷಯ -
ದೇವತಾಸ್ತುತಿ ಮತ್ತು ಗುರುಸ್ತುತಿ