ಕೀರ್ತನೆ - 43     
 
ಏನೆಂದಳೇನೆಂದಳೋ ನಿನ್ನೊಳು ಸೀತೆ ಹನುಮಯ್ಯ ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲು ಧನು ಮುರಿದು ಕೈಹಿಡಿದು ತನ್ನ ಘನ ಪದವಿಯನು ಬಿಟ್ಟು ವನವ ಸೇರಿದನೆಂದು ವನಿತೆ ತಪಿಸುತೆ ಮನದಿ ನೊಂದು ಕುರುಹಿನುಂಗುರವನು ತರಳಾಕ್ಷಿಗಿತ್ತಾಗ ತಿರುಳಿಗಿಂತಧಿಕವೇ ಕರಟವೆಂದು ಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆ ನಿರುತ ಸಂತಾಪದಲಿ ಮನದಿ ನೊಂದು ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರ ಜಾತ ಲಂಕಾಧಿಪನ ವಧಿಸಿ. ಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆ ನಾಥಾದಿಕೇಶವಗೆ ಬಲು ಬಿರುದು ಎಂದು