ಕೀರ್ತನೆ - 40     
 
ಅರಸಿನಂತೆ ಬಂಟನೋ ಹನುಮರಾಯ ಅರಸಿನಂತೆ ಬಂಟನೆಂಬುದ ನೀನು ಕುರುಹು ತೋರಿದೆ ಮೂರು ಲೋಕಕೆ ಹನುಮ ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದು ತಡೆಯದೆ ಶ್ರುತಿಯನಜಗಿತ್ತನೆಂದು ಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ- ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ ಮಂದರಧರ ಗೋವರ್ಧನ ಗಿರಿಯನು ಲೀಲೆ- ಯಿಂದಲಿ ನಿಂದು ನೆಗಹಿದನೆಂದು ಸಿಂಧು ಬಂಧನಕೆ ಸಮಸ್ತ ಪರ್ವತಗಳ ತಂದು ನಳನ ಕೈಯೊಳಗಿತ್ತೆ ಹನುಮ ಸಿರಿಧರ ವರ ಕಾಗಿನೆಲೆಯಾದಿಕೇಶವ ಸುರರಿಗಮೃತವನು ಎರೆದನೆಂದು ವರ ಸಂಜೀವನವ ತಂದು ಸೌಮಿತ್ರಿಗಂದು ಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ