ಕೀರ್ತನೆ - 39     
 
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿ ಮನಸಿಜನೊಡೆಯನೆ ಕನಕಗರ್ಭನ ಜನಕ ಮಚ್ಚ್ಯಾವತಾರ ನೀನಾದರೆ - ಆಕೆ ಮಚ್ಚ್ಯಾಗಂಗಳೆ ತಾನಾದಳೊ ಹೆಚ್ಚಿನ ಶಂಖವ ಪಿಡಿದರೆ – ಆಕೆ ನಿಚ್ಚ ಶಂಖಕಂಠಳಾದಳಯ್ಯ ನೀಲವರ್ಣ ನೀನಾದರೆ -ಆಕೆ ನೀಲಕುಂತಳೆ ತಾನಾದಳೊ ಲೋಲ ಕಮಲನಾಭನಾದರೆ -ಆಕೆ ಬಾಲ ಕಮಲಮುಖಿಯಾದಳಯ್ಯ ಬೆಟ್ಟವ ನೀನೊಂದು ಪೊತ್ತರೆ – ಆಕೆ ಬೆಟ್ಟದಂಥ ಕುಚವೆರಡು ಪೊತ್ತಳೊ ಮೆಟ್ಟಿ ಶೇಷನ ನೀ ತುಳಿದರೆ - ಆಕೆ ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ ಗಜರಾಜವರದ ನೀನಾದರೆ - ಆಕೆ ಗಜಗಮನೆಯು ತಾನಾದಳಯ್ಯ ನಿಜ ನರಸಿಂಹ ನೀನಾದರೆ - ಆಕೆ ಭಜಿಸಿ ಸಿಂಹಮಧ್ಯೆಯಾದಳಯ್ಯ ಈ ಪರಿಯೊಳು ನೀನು ಜನಿಸಿದೆ - ಭಲೆ ಭಾಪುರೆ ಬಾಡದೊಳು ನೆಲೆಸಿದೆ ಗೋಪಿಯರ ಮೋಹ ಸಲಿಸಿದೆ - ಚೆಲುವ ಶ್ರೀಪತಿ ಆದಿಕೇಶವರಾಯ ಮೆರೆದೆ