ವಿಶ್ವಲೋಕೇಶ ವಿಶ್ವಲೋಕೇಶ ವಿಮಲೈಕ ಮೂರ್ತಿ
ವಿಶ್ವ ಉದ್ಧರ ವಿಶ್ವ ಜ್ಞಾನರೂಪ
ವಿಶ್ವದೊಳ ಹೊರಗು ನೀನಲ್ಲದೆ ಬೇರೆ
ವಿಶ್ವನಾಟಕ ಸೂತ್ರಧಾರರುಂಟೆ ಹರಿಯೆ
ಮುಕುಟ ಮಂಡೆಯಲಿ ಧ್ರುವಲೋಕ ಭುವನಾವಳಿಯು
ನಿಖಿಲ ಶ್ರುತಿ ನವರತುನ ನಿಟಿಲದಲ್ಲಿ
ಮುಖದಲಿಂದ್ರರು ಅಗ್ನಿ ಸಪ್ತ ಋಷಿಗಳು ದ್ವಿಜರು. ಮುಖದ್ವಾರದುಸುರಿನಲಿ ಶ್ರುತಿ ಮರುತರು
ದೃಕುಯುಗದಿ ರವಿ ಶಶಿಯು ಎವೆಯಲ್ಲಿ ನಕ್ಷತ್ರ
ಪ್ರಕಟ ಜಿಹ್ವೆಯ ವಾಣಿ ಕರ್ಣದ್ವಯದಿ
ವಿಕಟ ಕಿವಿಯಲಿ ಅಶ್ವಿನಿದೇವತೆಗಳೆಲ್ಲ
ಸಕಲ ಧರ್ಮವ ಪಡೆದೆಯೆಲೊ ಹರಿಯೆ
ಸ್ಕಂಧದಲಿ ಅತಿಥಿಗಳು ವಿದ್ಯಾತತಿಗಳು ಮಹಾ
ಚಂದದರಸುಗಳು ಭುಜ ತೋಳಿನಲ್ಲಿ
ಮುಂದುರದಿ ವಿಷ್ಣು ಹರ ಬ್ರಹ್ಮ ಸಹಿತುದರದಲ್ಲಿ
ಹಿಂದಿನ ಮಗ್ಗುಲಲಿ ಮನುಮುನಿಗಳು
ಮುಂದಿನ ಮಗ್ಗುಲಲಿ ಗಿರಿನಿಚಯಂಗಳು
ಸಂಧಿಯಲಿ ಮಕರಂದ ದೇವತೆಗಳು
ಮುಂದೊರೆದಿಹ ರೋಮಕೂಪದಗ್ರದಳತೆಯು
ವೃಂದಗಳ ಶೋಭಿಪ ರೀತಿಯ ಪಡೆದೆಯೆಲೊ ಹರಿಯೆ
ಬೆನ್ನಿನಲಿ ವಸುನಿಕರ ಸ್ಮರನು ಲಿಂಗದಲಿ ಈ ಭು-
ವನವೆಲ್ಲವು ಚೆಲುವ ನಾಭಿಯಲ್ಲಿ
ಮುನ್ನ ಕೈಯಲಿ ವಿಶ್ವದೇವತೆಗಳು ವೈಶ್ಯ
ಉನ್ನತ ಜಾನುವಿನ ಸಕ್ತಿಯಲಿ
ಭಿನ್ನ ನದಿಗಳು ಸಮ್ಮೋಹನ ಶಕ್ತಿ ಪ್ರ-
ಸನ್ನ ಪಾದಾಬ್ಜದಿಂ ಶೂದ್ರರು
ನಿನ್ನ ಅವಯವದಲ್ಲಿ ಸಕಲವಂ ಪಡೆದ ಪ್ರ-
ಸನ್ನ ಕಾಗಿನೆಲೆಯಾದಿಕೇಶವರಾಯ
Music
Courtesy:
ಸ್ಥಲ -
ವಿಷಯ -
ಶ್ರೀಹರಿ ಸ್ತುತಿ ಮತ್ತು ಶ್ರೀಲಕ್ಷ್ಮಿ ಸ್ತುತಿ