ಕೀರ್ತನೆ - 34     
 
ರಾಮನಾಮವ ನೆನೆ ಮನವೆ ರಾಮ ಎಂದವನೆ ಧನ್ಯನೆಂದು ಶ್ರುತಿತತಿಗಳು ಪೊಗಳುತಿದೆ ತರುಣತನದಿ ದಿನ ದಾಟಿತು ಸುಮ್ಮನೆ ಶರೀರದೊಳು ಸ್ವರವಾಡುತಲೆ ತರುಣಿ ಸುತರು ಸಂಸಾರವೆಂಬ ಶರಧಿಯೊಳಗೆ ಮುಳುಗಿರದೆ ಮನವೆ ಬಗೆಬಗೆ ಜನ್ಮದಿ ಜನಿಸಿದ ನಾಳೆಗೆ ಸಿಗುವುದೆ ನಿಜದಿಂ ಈ ಸಮಯ ಮುಗುಧನಾಗಿ ಮತ್ತೆ ಜನಿಸಿ ಬರುವುದು ಸೊಗಸು ಕಾಣುವುದೆ ಛಿ ಮನವೆ ಚಿಂತೆಯನೆಲ್ಲ ಒತ್ತಟ್ಟಿಗಿಟ್ಟು ಅಂತರಂಗದಲ್ಲಿ ಧ್ಯಾನಿಸುತ ಕಂತುಪಿತ ಕನಕಾದಿಕೇಶವನ ಎಂತಾದರೂ ನೀ ಬಿಡಬೇಡ ಮನವೆ