ಕೀರ್ತನೆ - 33     
 
ಯಾದವರಾಯ ಬೃಂದಾವನದೊಳು ವೇಣು ನಾದವ ಮಾಡುತಿರೆ ರಾಧೆ ಮುಂತಾದ ಗೋಪಿಯರೆಲ್ಲ ಮಧುಸೂದನ ನಿಮ್ಮನು ಸೇವಿಸುತ್ತಿರೆ ಸುರರು ಅಂಬರದಿ ಸಂದಣಿಸಿರೆ ಅ- ಪ್ಸರ ಸ್ತ್ರೀಯರು ಮೈಮರೆದಿರೆ ಕರದಲಿ ಕೊಳಲನೂದುತ ಪಾಡುತ ಸರಿಗಮ ಪದನಿ ಸ್ವರಗಳ ನುಡಿಸುತ ಹರಬ್ರಹ್ಮರು ನಲಿದಾಡುತಿರೆ ತುಂ- ಬುರು ನಾರದರು ಪಾಡುತಿರೆ ಪರಿಪರಿ ವಿಧದಲಿ ರಾಗವ ನುಡಿಸುತ ತುರು ಹಿಂಡುಗಳ ಕೂಡುತ ಪಾಡುತ ತುರು ಹಿಂಡುಗಳ ತರತರದಲಿ ತನ್ನ ಕರದಿಂ ಬೋಳೈಸಿ ಸಂತೈಸುತ ಅರವಿಂದ ನಯನ ಆದಿಕೇಶವರಾಯ ಕರುಗಳ ಸಹಿತ ಗೋವ್ಗಳ ತಿರುಹುತ