ಕೀರ್ತನೆ - 31     
 
ಮರೆಯದಿರು ಹರಿಯ ಮರೆವರೆ ಮೂರು ಲೋಕದ ದೊರೆಯ ಮದಗಜ ಹರಿಯೆಂದು ಕರೆಯಲು, ಒದಗಿ ಆಕ್ಷಣ ಬಂದು ಮುದದಿ ನಕ್ರನ ಕೊಂದು ಸಲ- ಹಿದ ಸದ್ಭಕ್ತರ ಬಂಧು ಹದುಳ ಪ್ರಹ್ಲಾದನ ಹೆದರಿಸಿದಸುರನ ಉದರವ ಬಗೆದಂಥದುಭುತ ಮಹಿಮನ ನಾರಿಯು ತನ್ನ ಕರೆದ ಮಾತ್ರದಿ ಸೀರೆಯ ಮಳೆಗರೆದ ಕ್ರೂರ ಖಳನ ತರಿದು ಆ ಪಾಂಡವರ ಆರಣ್ಯದಿ ಪೊರೆದ ಗಾರಾದಜಮಿಳ ನಾರಗ ಎನಲು ಪಾರಗಾಣಿಸಿದಪಾರ ಗುಣನಿಧಿಯ ಒಂದು ಬಾರಿ ಶ್ರೀಶಾ ಎಂದರೆ ಬಂದ ದುರಿತ ನಾಶಾ ಬೆಂದವು ಭವ ಪಾಶಾ - ಅವ ಗೆಂದೆಂದಿಗಿಲ್ಲ ಕ್ಲೇಶಾ ತಂದೆ ಕದರುಂಡಲಗಿ ಹನುಮಯ್ಯನೊಡೆಯ ಚಂದಾದಿಕೇಶವನ ನೆನೆದವರೆಂದಿಗು ಧನ್ಯರು