ಕೀರ್ತನೆ - 24     
 
ಪಕ್ಷಿ ಬಂದಿದೆ ಗಂಡಭೇರುಂಡ - ತನ್ನ ಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾ ಹರುಷದಿಂದ ವೈಷ್ಣವರೆಡೆಯ ಪಾಡಿ ಪರವ ತೋರುವೆನೆಂದು ಪಾಕವನೆತ್ತುತಾ ಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ ಅಕಾರ ಉಕಾರ ಮಕಾರ ಸಾಕಾರದಿಂದ ಪರಮ ರೂಪವ ತಾಳಿ ಆಕಾರ ಕ್ರಿಯಾ ನಾಮ ಮಕಾರವನು ಓಂಕಾರದಿಂದ ಪುಟ್ಟಿಸಿದಂಥ ಪರವಸ್ತು ಪಾಖಂಡವೆಂತೆಂಬ ಪರವಾದಿಗಳನ್ನು ಲೋಕದೊಳು ತಮ್ಮೊಳಗೈಕ್ಯಮಾಡಿ ಜಗ ದೇಕ ಪತಿ ತಿರುವಕೋವಲೂರಿನೊಳಿರುವಂಥಾ ದಿಕೇಶವರಾಯ ತಾನಾದ ಪರವಸ್ತು