ಕೀರ್ತನೆ - 22     
 
ನೆನೆಯ ಬಾರದೆ ಮನವೆ ಪರಮಪಾವನನ ಸಾಕಾರದಿಂದ ಸರ್ವವನು ರಕ್ಷಿಪನ ಜೋಕೆಯಲಿ ತನ್ನ ನೆನೆವವರ ಪಾಲಿಪನ - ಅ- ನೇಕ ಮೂರುತಿ ಸೂರ್ಯನಾರಾಯಣನ ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನ ಒಮ್ಮೆ ನೆನೆಯಲು ಪ್ರಸನ್ನನಾದವನ ಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನ ನಿರ್ಮಲಾತ್ಮಕವಾಗಿ ಥಳಥಳಿಸುವವನ ಹರಗೆ ನಯನವಾಗಿ ಮಕುಟವ ಬೆಳಗುವನ ತರುಣಿಯೈವರ ಲಜ್ಜೆ ಕಾಯ್ದವನ ದುರಿತಕೋಟಿಗಳನುದ್ಧರಿಸುವವನ ಪರಬ್ರಹ್ಮ ಕಾಗಿನೆಲೆಯಾದಿಕೇಶವನ ಮರೆಯದೆ ಭಜಿಪರ ಕಾಯುವವನ