ಕೀರ್ತನೆ - 11     
 
ಎಂಥ ಕೀರುತಿ ಪೊತ್ತುವೆರಡು ಪಾದ - ಶ್ರೀ- ಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ ಕುಬ್ಬ ಬ್ರಾಹ್ಮಣನಾಗಿ ಕುಂಭಿನಿ ಈರಡಿ ಮಾಡಿ ಹೆಜ್ಜೆಯೊಳಡಗಿಟ್ಟ ಹೆಚ್ಚಿನ ಪಾದ ಅರ್ಜುನನ ಶಿರವ ಕಾಯಲು ಬಾಣದಿಂದ ರಥವ ಗುಜ್ಜೆಯಲೂರಿ ನೆಲಕೊತ್ತಿದ ಪಾದ ಶಾಪದಿ ಬಹುಕಾಲ ಅಹಲೈಯು ಶಿಲೆಯಾಗೆ ಆ ಪ್ರಾಣ ನಿರ್ಮಿಸಿದ ಅಧಿಕ ಪಾದ ಗೋಪಿ ಕಟ್ಟಿದ ಒರಳ ಗೊಲ್ಲಗೇರಿಗೆಳೆಯುತ ಆ ಫಣಿಯ ತಲೆಯ ಮೇಲಾಡಿದ ಪಾದ ಕುರುರಾಯನೇಳದೆಯೆ ಕುಳಿತ ಸಿಂಹಾಸನದಿ ಉರುಳಿಸಿಬಿಟ್ಟಂತ ಉನ್ನತ ಪಾದ ಮರಕತ ನಗರಿಯ ಬಾಡ ಬಂಕಾಪುರ ದರಸು ಸಿರಿಯಾದಿಕೇಶವನ ಶ್ರೀಪಾದ