ಎಲ್ಲಿ ನೋಡಿದರಲ್ಲಿ ರಾಮ -ಇದ
ಬಲ್ಲ ಜಾಣರ ದೇಹದೊಳಗೆ ನೋಡಣ್ಣ ಅ
ಕಣ್ಣೀ ಕಾಮನ ಬೀಜ - ಈ ಕ
ಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯ
ಕಣ್ಣಿನ ಮೂರುತಿ ಬಿಗಿದು - ಒಳ
ಗಣ್ಣಿಂದಲೇ ದೇವರ ನೋಡಣ್ಣ
ಮೂಗೇ ಶ್ವಾಸ ನಿಶ್ವಾಸ – ಈ
ಮೂಗಿಂದಲೇ ಕಾಣೊ ಯೋಗ ಸಂನ್ಯಾಸ
ಮೂಗನಾದರೆ ವಿಶೇಷ - ಒಳ
ಮೂಗಲಿ ನೋಡಣ್ಣ ಲೀಲಾವಿಲಾಸ
ಕಿವಿಯೇ ಕರ್ಮಕೆ ದ್ವಾರ - ಈ
ಕಿವಿಯಿಂದಲೇ ಕೇಳೋ ಮೋಕ್ಷದ ಸಾರ
ಕಿವಿಯೇ ಕರ್ಮ ಕುಠಾರ - ಒಳ
ಗಿವಿಯಲ್ಲಿ ಕಾಣೆ ನಾದದ ಬೇರ
ಬೊಮ್ಮ ಮಾಡಿದ ತನುಬಿಟ್ಟು - ವಿಶ್ವ
ಕರ್ಮನು ಮಾಡಿದ ಬೊಂಬೆಯನಿಟ್ಟು
ಸುಮ್ಮನೆ ಕೂಗುಗಳಿಟ್ಟು – ಅದ
ನಂಬುವನೆಂಬೋನು ಹೋಹ ಕಂಗೆಟ್ಟು
ರೂಢಿಯೊಳಗೆ ಶುದ್ಧ ಮೂಢ – ಈ
ಕಾಡುಕಲ್ಲುಗಳನ್ನು ನಂಬಬೇಡ
ನಾಡಾಡಿ ದೈವಗಳನೆಲ್ಲ - ನಮ್ಮ
ಬಡದಾದಿ ಕೇಶವನೊಬ್ಬನೆ ಬಲ್ಲ
Music Courtesy:
Video
Transliteration
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ವಿಷಯ -
ಶ್ರೀಹರಿ ಸ್ತುತಿ ಮತ್ತು ಶ್ರೀಲಕ್ಷ್ಮಿ ಸ್ತುತಿ