ಕೀರ್ತನೆ - 7     
 
ಆವ ಬಲವಿದ್ದರೇನು - ವಾಸು ದೇವನಾ ಬಲವು ನಿಜವಾಗಿ ಇರದನಕ ನೊಸಲಗಣ್ಣನ ಬಲ ನಾಲ್ಕು ತೆರದ ಬಲ ತ್ರಿಶುಲ ಡಮರು ಅಗ್ನಿ ಫಣಿಯ ಬಲವು ಪಶುಪತಿಯ ರೂಪಿನ ಬಲದ ಶಿಶುಪಾಲನ ಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ ಹರನ ಕರುಣದ ಬಲವು ಸುರರ ಗೆಲಿದಾ ಬಲವು ಪರಮ ಶಕ್ತಿಯು ತನ್ನ ಭುಜದ ಬಲವು ಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನ ಶಿರವ ಹರಿ ವರಾಹನಾಗಿ ತರಿವಾಗ ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲ ಘನ್ನ ಲಂಕಿಣಿಯ ಕಾವಲಿನ ಬಲವು ತನ್ನ ವಂಶದ ಬಲವುಳ್ಳ ರಾವಣನ ಶಿರವ ಸನ್ನುತ ರಾಘವ ಪಟ್ಟನೆ ಪಾರಿಸುವಾಗ ಲಿಂಗಪೂಜೆಯ ಬಲ ನಿಶ್ಚಿಂತನಾಗಿಹ ಬಲ ಹಿಂಗದೆ ಹರನು ಬಾಗಿಲ ಕಾಯ್ದ ಬಲವು ಮುಂಗೈಯ ಶಕ್ತಿ ಸಾವಿರ ತೋಳ ಬಾಣನ ತುಂಗ ವಿಕ್ರಮ ಕೃಷ್ಣ ತೋಳ ಖಂಡಿಸುವಾಗ ಈಸು ದೇವರ ಬಲಗಳಿದ್ದರೆ ಫಲವೇನು ವಾಸುದೇವನ ಬಲವಿಲ್ಲದವಗೆ ದೇಶಕಧಿಕ ಕಾಗಿನೆಲೆಯಾದಿಕೇಶವನ ಲೇಸಾದ ಚರಣ ಕಮಲದ ಬಲವಿರದನಕ