ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ
ದರಿತು ಪೂಜಿಸಬಾರದೆ
ಆತನಾ ಪದತೋಯ ಶಿರಸಾ ವಹಿಸಿ ಪಾನ-
ದಿಂದಧಿಕರಾದರು - ಜೀವಿಗಳು ಮನುಜ
ದಾನಮುಖದಲಿ ಬಲಿಯ ಬೇಡಿ ಭುವನವನೊಂದು
ಪದದಿ ಅಳೆದವನಾವನು
ಮಾನದಾನವನ ನಾಲ್ಕೆಯ ಮುಡಿಗಟ್ಟಿವನ
ಮಾನ ಉಳುಹಿದನಾವನು
ಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆ
ಮಹಿಗೆ ಇಳುಹಿದನಾವನು
ಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದು
ಪಾದ ಹೊದಿಸಿದನಾವನು ?
ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನು
ಕುಟ್ಟಿ ಹಾಕಿದನಾವನು
ದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ
ಪಟ್ಟದರಸು ಅದಾವನು
ಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮ
ಗುಟ್ಟಿನಲಿ ನೆನೆಸಿದುದಾವನು
ಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನು
ಬಿಟ್ಟೋಡಿಸಿದನಾವನು ?
ವೇದಮುಖದವನ ಅತಿ ಮೋದದಲಿ ಪುಟ್ಟಿಸಿದ
ಆದಿಮೂರುತಿ ಅವನು
ನಾದದಲಿ ಅಖಿಳ ಮಹಿ ನಟಿಸುವ ಮಹಾತ್ಮಕ
ನಾದ ಸಾತ್ತ್ವಿಕನಾವನು
ಆದಿಯಲಿ ಜಗಗಳಿರದಂದು ವಟಪತ್ರಶಯನ
ನಾದ ಮೂಲವದಾವನು
ಆದಿಕೇಶವ ದೈವವಲ್ಲದಿನ್ನಿಲ್ಲವೆಂದು
ಆಗಮವು ನುಡಿವುದಾವನನು ?
Music
Courtesy:
ಸ್ಥಲ -
4
ವಿಷಯ -
ಶ್ರೀಹರಿ ಸ್ತುತಿ ಮತ್ತು ಶ್ರೀಲಕ್ಷ್ಮಿ ಸ್ತುತಿ