ಕೀರ್ತನೆ - 1442     
 
ಕರೀಠ ಕುಂಡಲಧರನ ಕಂಡೆ | ಹಾರಮಣಿ ಭೂಷಣನ ಕಂಡೆ | ಸಿರಿಯಿಪ್ಪ ವಕ್ಷಸ್ಥಳವ ನಾ ಕಂಡೆ | ವರಾಂಬರನ ಕಂಡೆ ವರದೇಶನ ಕಂಡೆ | ತಿರುಮಲ ಗಿರಿಯಲಿ ಸಿರಿ ಪುರಂದರವಿಠಲನ | ಇರವ ನಾ ಕಂಡೆ ಚೆಲುವನ ನಾ ಕಂಡೆ