ಕೀರ್ತನೆ - 1437     
 
ಇಂತು ಪ್ರಕೃತಿ ಸಂಬಂಧವಾದಡೆ | ಬೊಮ್ಮರುದ್ರ ಇಂದ್ರ ದಿಕ್ಪಾಲಕರು ಮತ್ತೆ | ದೇವತೆಗಳು ಮನು ಮುನಿಗಳು | ಶರೀರದಲಿ ವಾಸವಾಗಿ ಪುರಂದರವಿಠಲ | ಸೃಷ್ಠಿ ಸ್ಥಿತಿ ಲಯಕೆ ಕಾರಣ ದೇವತೆಗಳು ಮನು ಮುನಿಗಳು | ಕರ್ಮಚಾಂಡಗಳ ಮರ್ಮಗಳ ತಿಳಿದು ಫಲವೀವ | ನಿರ್ಮಲ ಚರಿತ್ರ ಪುರಂದರ ವಿಠಲ ||