ಕೀರ್ತನೆ - 1436     
 
ಶ್ವೇತ ದ್ವೀಪವು ಸುತ್ತಿದ ಉದಕವು । ಬಯಲಾದ ಮೇಲೆ ಅಂಧಂ ತಮಸು | ಏಳುಕೋಟೆ ಪರಿಮಿತವಾದ ನರಕವು । ಶುಕ್ಲ ಶೋಣಿತ ಮೂತ್ರ ಅಶುದ್ಧದಿಂದ | ಮಿಶ್ರವಾದ ತಮಸಿನೊಳು ಪೂರ್ಣ ಸಾಧನವನು | ಮಾಡಿದ ಜನರಿಗೆ ಹರಿದ್ವೇಷ ಭಕ್ತರಲ್ಲಿ | ಅನಾದಿ ಕಾಲದಿ ಮಾಡಿ ದುಃಖಭಾಜನರಾದ । ಪಾಪಿ ಜೀವರನು ವಾಯುಭ್ಯತ್ಯರಿಂದ ಪ್ರೇರಿಸಲಾಗಿ | ಲಿಂಗ ಶರೀರವ ಹೋಳು ಮಾಡಿ | ಕೆಡಹಿತು ಅಂಧಂ ತಮಸಿನೊಳು | ಕ್ರಿಮಿ ಪಕ್ಷಿಗಳಿಂದ ಬಾಧೆಯಲ್ಲದೆ ಮೇಲೆ । ಪರ್ವತಂಗಳ ತಂದು ಬಿಸುಡುವರು | ಭೀಮನ ದೂತರಿಂದ ನೊಂದು | ದುಃಖಭಾಜನರಾದ ಪಾಪಿ ಜೀವರಿಗೆ | ಎಂತು ಮಾಡಿದರೆ ಅದರಂತೆ ಫಲವೀವ | ಕಂತು ಜನಕ ಪುರಂದರವಿಠಲರೇಯ