ಕೀರ್ತನೆ - 1432     
 
ನೂರು ವರುಷವು ಇಂದಾಯಿತೆನಲು | ಉದಯಕಾಲದಿ ಚತುರ್ದಶ ಭುವನಾತ್ಮಕವಾದ ಚತುರ್ಮುಖ | ಬೊಮ್ಮನ ಪಡೆದೆ ನೀನು | ಒಮ್ಮೆ ಬಂದು ನಿನ್ನ ಪ್ರಳಯೋದಕವನು । ತೆರೆಗಳ ನೋಡಿ ಏನು ಕಾಣದೆ ಪೊಕ್ಕು ನಾಳದಲ್ಲಿ | ಮತ್ತೊಮ್ಮೆ ಬರಲು ನಿನ್ನ ಘೋರವಾದ । ನಿನ್ನ ರೂಪವ ಕಂಡು ಅಂಜಿ ಮತ್ತೆ | ನ್ನ ಮನವೇನೆಂದು ಬಂದದು ಕಂಡು ಉದರ ಪ್ರವೇಶವಾದ | ಒಂದು ಭಯವು ಎರಡು ಅಜ್ಞಾನವು । ನಿನ್ನ ವಿಷಯದಲ್ಲಿ ಉಂಟಾದಡಾಗಲಿ | ಕಂತು ಜನಕ ನೀನೆ ತಪತಪವೆನಲಾಗ ॥ ತಪವನು ಮಾಡಿದ ಪುರಂದರ ವಿಠಲನ್ನ | ಒಲಿಸಿ ಸೃಷ್ಟಿಯ ಮಾಡಿದ ಸರಸಿಜ ಸಂಭವನು