ಕೀರ್ತನೆ - 1427     
 
ನಿನ್ನ ಧ್ಯಾನವ ಕೊಡೊ ಎನ್ನ ಧನ್ಯನ ಮಾಡೊ ಪನ್ನಗಶಯನ ಶ್ರೀ ಪುರಂದರ ವಿಠಲ ಅಂಬುಜನಯನನೆ ಅಂಬುಜಜನಕನೆ ಅಂಬುಜನಾಭ ಶ್ರೀ ಪುರಂದರವಿಠಲ ಭಾಗೀರಥೀಪಿತ ಭಾಗವತರ ಪ್ರಿಯ ಯೋಗಿಗಳರಸ ಶ್ರೀ ಪುರಂದರ ವಿಠಲ.