ಕೀರ್ತನೆ - 1424     
 
ಹಗಲು ನಿನ್ನ ನೆನೆಯಲಿಲ್ಲ ಹಸಿವು ತೃಷೆಯಿಂದ ಇರುಳು ನಿನ್ನ ನೆನೆಯಲಿಲ್ಲ ನಿದ್ರೆ ಭರದಿಂದ ಈ ಎರಡರ ಬಾಧೆಗೆ ನಾನೊಳಗಾದೆನೊ ಸಲಹೊ ಪುರಂದರ ವಿಠಲ.