ಕೀರ್ತನೆ - 1423     
 
ಉದಯ ಅಸ್ತಮಾನವೆಂಬೊ ಎರಡು ಕೊಳಗವಿಟ್ಟು ಆಯಸ್ಸು ಎಂಬೊ ರಾಸಿ ಅಳೆದು ಹೋಗುವ ಮುನ್ನ ಹರಿಯ ಭಜಿಸಬೇಕು ಮನ ಮುಟ್ಟಿ ಭಜಿಸಿದರೆ ತನ್ನ ಕಾಯವು ಘಟ್ಟಿ ಹಾಗಲ್ಲದಿದ್ದರೆ ತಾಪತ್ರಯ ಬೆನ್ನಟ್ಟಿ ವಿಧಿಯೊಳು ಗೆಯ್ದಾಗ ಹೋಗದಯ್ಯ ಕಟ್ಟಿ ಪುರಂದರವಿಠಲನ ಕರುಣಾದೃಷ್ಠಿ ಅವನ ಮೇಲಿದ್ದರೆ ಅವ ಜಗಜಟ್ಟಿ.