ಕೀರ್ತನೆ - 1422     
 
ಒಂದೇ ಒಂದು ಬೆರಳ ಜಪ ಒಂದೇ ಹತ್ತು ಪುತ್ರಂಜೀವಿ ಮಣಿಯ ಜಪ ಒಂದೇ ನೂರು ಶಂಖದ ಮಣಿಯ ಜಪ ಒಂದೇ ಸಹಸ್ರ ಹವಳದ ಜಪ ಒಂದೇ ಹತ್ತು ಸಾಹಸ್ರ ಮುತ್ತಿನ ಮಣಿಯ ಜಪ ಒಂದೇ ಲಕ್ಷ ಸ್ವರ್ಣ ಮಣಿಯ ಜಪ ಒಂದೇ ಕೋಟಿ ದರ್ಭೆ ಗಂಟಿನ ಜಪ ಒಂದೇ ಅನಂತ ಶ್ರೀ ತುಲಸಿ ಮಣಿಯ ಜಪ ವೆಂದು ಪೇಳಿದ ಪುರಂದರ ವಿಠಲ