ಕೀರ್ತನೆ - 1419     
 
ಮಾರಿಯ ಕೈಯಿಂದ ನೀರ ತರಿಸುವರು ಮಸಣಿಯ ಕೈಯಿಂದ ಕಸವ ಬಳಿಸುವರು ಮೃತ್ಯುವಿನ ಕೈಯಿಂದ ಬತ್ತವ ಕುಟ್ಟಿಸುವರು ಜವನವರ ಕೈಯಿಂದ ಜಂಗಲಿಯ ಕಾಯಿಸುವರು ಪುರಂದರ ವಿಠಲನ ದಾಸರು ಸರಿ ಬಂದಹಾಗಿಹರು ಭೂಮಿಯ ಮೇಲೆ.