ಕೀರ್ತನೆ - 1417     
 
ಎನ್ನ ಕಡೆ ಹಾಯಿಸುವುದು ನಿನ್ನ ಭಾರ ನಿನ್ನ ನೆನೆಯುತಲಿಹುದು ಎನ್ನ ವ್ಯಾಪಾರ ಎನ್ನ ಸತಿ ಸುತರಿಗೆ ನೀನೆ ಗತಿ ನಿನ್ನನೊಪ್ಪಿಸುವುದು ನನ್ನ ನೀತಿ ಎನ್ನ ಪಡಿಯಿಕ್ಕಿ ಸಲಹುವುದು ನಿನ್ನ ಧರ್ಮ ನಿನ್ನ ಅಡಿಗೆರಗುವುದು ಎನ್ನ ಕರ್ಮ ಎನ್ನ ತಪ್ಪುಗಳನೆಣಿಸುವುದು ನಿನ್ನದಲ್ಲ ನಿನ್ನ ಮರೆತು ಬದುಕುವುದು ಎನ್ನದಲ್ಲ ನೀನಲ್ಲದಿನ್ನಾರಿಗೆ ಮೊರೆಯಿಡುವೆ ಪುರಂದರ ವಿಠಲ.